ಪ್ರಣಬ್ ಮುಖರ್ಜಿ (ಡಿಸೆಂಬರ್ 11, 1935 - ಆಗಸ್ಟ್ 31, 2020) ಭಾರತದ ಪಶ್ಚಿಮ ಬಂಗಾಲದಲ್ಲಿ ಜನಿಸಿದ ಇವರು ಭಾರತದ ೧೩ನೇ ರಾಷ್ಟ್ರಪತಿ ಮತ್ತು ವಿತ್ತ ಮಂತ್ರಿಯಾಗಿದ್ದರು. ಇವರು (೧೫ನೇ) ಲೋಕ ಸಭೆಯ (ಭಾರತ ಸಂಸತ್ತಿನ ಕೆಳಮನೆ) ನಾಯಕ ಹಾಗು ಕಾಂಗ್ರೆಸ್ ಕಾರ್ಯ ಸಮಿತಿಯ ಸದಸ್ಯ ಕೂಡ (ಸಿ.ಡಬ್ಲ್ಯೂ.ಸಿ) ಆಗಿದ್ದರು. ಇವರು ಕಲ್ಕತ್ತ ವಿಶ್ವವಿದ್ಯಾಲಯದಿಂದ ನ್ಯಾಯಶಾಸನದಲ್ಲಿ ಮಾಸ್ಟರ್ಸ್ ಪದವಿಯನ್ನು ಪಡೆದಿದ್ದಾರೆ. ಇವರು ವಕೀಲ ಹಾಗು ಕಾಲೇಜಿನ ಉಪಾಧ್ಯಾಯರಾಗಿ ಕಾರ್ಯ ನಿರ್ವಹಿಸಿದ್ದಾರೆ.ಇವರು ಗೌರವಾರ್ಥ ಡಿ.ಲಿಟ್ಟ್ ಕೂಡ ಹೊಂದಿದ್ದಾರೆ. == ಆರಂಭಿಕ ಜೀವನ == ಪ್ರಣಬ್ ಮುಖರ್ಜಿ ಪಶ್ಚಿಮ ಬಂಗಾಲ ಬಿರ್ಬ್ಹುಂಜಿಲ್ಲೆಯ ಕಿರ್ನಹರ್ಬಳಿ ಇರುವ ಮಿರತಿ ಹಳ್ಳಿಯಲ್ಲಿ ಗ್ರಾಮದ ಕಿಂಕರ್ ಮುಖರ್ಜಿ ಹಾಗು ರಾಜಲಕ್ಷ್ಮಿ ಮುಖರ್ಜಿಗೆ ಹುಟ್ಟಿದರು. == ವೃತ್ತಿಜೀವನ == ಪ್ರಣಬ್ ಮುಖರ್ಜೀ ತಮ್ಮ ವೃತ್ತಿಜೀವನವನ್ನು ಕಾಲೇಜ್ ಉಪಾಧ್ಯಾಯರಾಗಿ ಪ್ರಾರಂಭಿಸಿದರು. ನಂತರ ಪತ್ರಕರ್ತರಾದರು. == ರಾಜಕೀಯ ಜೀವನ == ಇವರ ಸಂಸತ್ತಿನ ವೃತ್ತಿಜೀವನ ಐದು ದಶಕದ್ದು, ಇವರು ಕಾಂಗ್ರೆಸ್ ಪಕ್ಷದಿಂದ ೧೯೬೯ ರಲ್ಲಿ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಗೊಂಡರು; ನಂತರ ೧೯೭೫, ೧೯೮೧, ೧೯೯೩ ಹಾಗು ೧೯೯೯ ಪುನರಾಯ್ಕೆಗೊಂಡರು. ೧೯೮೨ ರಿಂದ ೧೯೮೪ ರವರಗೆ .ಭಾರತದ ವಿತ್ತಮಂತ್ರಿಯಗಿದರು ಇವರು ಹಲವಾರು ಮಂತ್ರಿ ಪದವಿಯನ್ನು ನಿಭಾಯಿಸಿದರೆ; ರಕ್ಷಣ, ವಿತ್ತ, ಬಾಹ್ಯ ಇಲಾಖೆ, ಆದಾಯ, ನೌಕಾ, ಸಾರಿಗೆ, ಸಂಪರ್ಕ ವ್ಯವಸ್ಥೆ, ಆರ್ಥಿಕ ಇಲಾಖೆ, ವಾಣಿಜ್ಯ ಹಾಗು ಉದ್ದಿಮೆ. == ಅಂತರರಾಷ್ಟ್ರೀಯ ಪಾತ್ರ == ಅಕ್ಟೋಬರ್ ೧೦, ೨೦೦೮ ರಂದು ಮುಖೆರ್ಜೀ ಹಾಗು ಕಾಂಡೊಲಿನಾ ರೈಸ್ ಸೆಕ್ರೆಟರಿ ಆಫ್ ಸ್ಟೇಟ್(ಉನೈಟೆಡ್ ಸ್ಟೇಟ್ಸ್ ನ ವಿದೇಶಾಂಗ ಮಂತ್ರಿ / ವಿದೇಶಾಂಗ ಖಾತೆಯ ಕಾರ್ಯದರ್ಶಿ) ವಿಭಾಗ ೧೨೩ ಒಪ್ಪಂದಕೆ ಸಹಿಹಾಕಿದರು. == ರಾಜಕೀಯ ಪಕ್ಷದ ಪಾತ್ರ == ಪ್ರಣಬ್ ಮುಖರ್ಜಿಯವರು ಸಾಮಾಜಿಕ ಹಾಗು ಪಕ್ಷದಲ್ಲಿ ಬಹಳ ಗೌರವಾನ್ವಿತ ವ್ಯಕ್ತಿ. == ಭ್ರಷ್ಟಾಚಾರದ ದೃಷ್ಟಿಕೋನಗಳು == ಪ್ರಣಬ್ ಮುಖರ್ಜಿ ಅವರು ವಾಸ್ತವವಾದಿ. ರಿಡಿಫ್.ಕಂ ನೊಂದಿಗಿನ ಸಂದರ್ಶನದಲ್ಲಿ, ಅವರನ್ನು ಕಾಂಗ್ರೆಸ್‌ನಲ್ಲಿರುವ ಭ್ರಷ್ಟಾಚಾರದ ಬಗ್ಗೆ ಕೇಳಿದಾಗ. ಅವರ ಉತ್ತರ: ಭ್ರಷ್ಟಾಚಾರ ಒಂದು ಸಮಸ್ಯೆ. ನಾವು ನಮ್ಮ ಘೋಷಣೆಯಲ್ಲಿ ಇದರ ಬಗ್ಗೆ ಹೇಳಿದ್ದೇವೆ. ಆದರೆ ದುಃಖದ ಸಂಗತಿ ಎಂದರೆ ಇದು ಕಾಂಗ್ರೆಸ್‌ಗೆ ಮಾತ್ರ ಸಿಮಿತವಾದುದಲ್ಲ. ಎಷ್ಟೊಂದು ಹಗರಣಗಳಿವೆ. ಹಲವಾರು ರಾಜಕಾರಣಿಗಳು ಇದರಲ್ಲಿ ಬಾಗಿಯಾಗಿದ್ದಾರೆ. ಅದರಿಂದ ಇದು ಕೇವಲ ಕಾಂಗ್ರೆಸ್ ಸರ್ಕಾರಕ್ಕೆ ಸಿಮಿತವಾದುದು ಎನ್ನುವುದು ಸರಳೀಕೃತವಾಗುತ್ತದೆ. == ವಿದೇಶಾಂಗ ಮಂತ್ರಿ: ಅಕ್ಟೋಬರ್ ೨೦೦೬ == == ವಿತ್ತ ಮಂತ್ರಿ == ಮನಮೋಹನ್ ಸಿಂಗ್ರವರ ಎರಡನೇ ಸರ್ಕಾರದಲ್ಲಿ ,ಮುಖರ್ಜಿ ಅವರು ಭಾರತದ ವಿತ್ತ ಮಂತ್ರಿಯಾಗಿ ನೇಮಕಗೊಂಡರು, ಈ ಖಾತೆಯನ್ನು ಇವರು ೧೯೮೦ರ ದಶಕದಲ್ಲಿಯೇ ನಿಭಾಯಿಸಿದ್ದರು. == ವೈಯಕ್ತಿಕ ಜೀವನ == ಪ್ರಣಬ್ ಮುಖರ್ಜಿಯವರು, ಶುಭಾ ಮುಖರ್ಜಿಯವರನ್ನು ಜುಲೈ ೧೩, ೧೯೫೭ ರಂದು ಮದುವೆಯಾದರು,ಇವರಿಗೆ ಇಬ್ಬರು ಗಂಡು ಮಕಳು, ಅಭಿಜಿತ್ ಹಾಗು ಸುರೋಜಿತ್ ಹಾಗು ಒಬ್ಬಳು ಪುತ್ರಿ. (प्रणव का विवाह बाइस वर्ष की आयु में 13 जुलाई 1957 को शुभा मुखर्जी के साथ हुआ था।) [೧] == ನಿಧನ == ಪ್ರಣವ್ ಮುಖರ್ಜಿಯವರು ಆಗಸ್ಟ್ 31, 2020ರಂದು ದೀರ್ಘಕಾಲದ ಅನಾರೋಗ್ಯದಿಂದಾಗಿ ನಿಧನ ಹೊಂದಿದರು. == ಪುರಸ್ಕಾರಗಳು == ಇವರಿಗೆ ೨೦೦೭ರಲ್ಲಿ ಪದ್ಮ ವಿಭೂಷಣ ಪುರಸ್ಕಾರವನ್ನು ನೀಡಲಾಗಿದೆ. ಜನವರಿ 2019ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತರತ್ನ ಪುರಸ್ಕಾರದ ಘೋಷಣೆ ಮಾಡಲಾಯಿತು. == ನೋಡಿ == ಸುಧೀಂದ್ರ ಬುಧ್ಯ;ಒಲಿದ ಪದವಿಗೆ ನ್ಯಾಯ ಒದಗಿಸಿದ ಮುಖರ್ಜಿ;14 , 2017 2017-07-13 ವೇಬ್ಯಾಕ್ ಮೆಷಿನ್ ನಲ್ಲಿ. ಡಿ. ಉಮಾಪತಿ;;ಪ್ರಣವ್‌ ಬಾಬು ನಾಗಪುರಕ್ಕೆ ಹೋದದ್ದು ಯಾಕೆ?;11 , 2018 == ಆಕರಗಳು == == ಬಾಹ್ಯ ಕೊಂಡಿಗಳು == . 2007-12-28 ವೇಬ್ಯಾಕ್ ಮೆಷಿನ್ ನಲ್ಲಿ. : ://..///61//-.